ಆಂಗಸ್ ಸ್ಟೀವರ್ಟ್ ಡೀಟನ್(ಜನನ: 19 ಅಕ್ಟೋಬರ್ 1945), ಎಫ‍ಬಿಏ() ಅವರು ಬ್ರಿಟೀಶ್-ಅಮೇರಿಕನ್ ಅರ್ಥಶಾಸ್ತ್ರಜ್ಞನಾಗಿದ್ದಾರೆ. ಅವರು ೨೦೧೫ ರಲ್ಲಿ ಬಳಕೆ, ಬಡತನ, ಮತ್ತು ಕಲ್ಯಾಣ ದ ತಮ್ಮ ವಿಶ್ಲೇಷಣೆಗಾಗಿ ಅರ್ಥಶಾಸ್ತ್ರ ವಿಜ್ಞಾನಗಳಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. == ಜೀವನಚರಿತ್ರೆ == ಆಂಗಸ್ ಡೀಟನ್ ಅವರು 19 ಅಕ್ಟೋಬರ್ 1945 ರಲ್ಲಿ ಎಡಿನ್ಬರೊ, ಸ್ಕಾಟ್ಲೆಂಡ್ನಲ್ಲಿ ಜನಿಸಿದರು ಮತ್ತು ತಮ್ಮ ವಿದ್ಯಾಭ್ಯಾಸವನ್ನು ಫೆಟಿಸ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಬಿ. ಎ., ಎಂಎ ಮತ್ತು ಡಿ.ಫಿಲ್ ಪದವಿಗಳನ್ನು ಪಡೆದರು. 1975 ರಲ್ಲಿ ಅವರ ಪ್ರಬಂಧ ಅನುಭೋಗಿ ಬೇಡಿಕೆಯ ಮಾದರಿಗಳು ಮತ್ತು ಸಂಯುಕ್ತ ಸಂಸ್ಥಾನಕ್ಕೆ ಅದರ ಅನ್ವಯ ನಂತರ ಅವರು ಫಿಟ್ಜ್ ವಿಲಿಯಮ್ ಕಾಲೇಜಿನಲ್ಲಿ ಸಂಶೋಧನಾರ್ಥಿಯಾಗಿ, ಮತ್ತು ಸಂಶೋಧನಾ ಆಫೀಸರ್ ಆಗಿ 'ಅನ್ವಯಿಕ ಅರ್ಥಶಾಸ್ತ್ರ' ವಿಭಾಗದಲ್ಲಿ ರಿಚರ್ಡ ಸ್ಟೋನ್ ಮತ್ತು ಟೆರ್ರಿ ಬಾರ್ಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು. 1976ರಲ್ಲಿ ಡೀಟನ್ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯದಲ್ಲಿ 'ಸಂಖ್ಯಾಗಣಿತಶಾಸ್ತ್ರ' ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದರು. ಈ ಸಮಯದಲ್ಲಿ, ಅವರು ತಮ್ಮ ಅತ್ಯಂತ ಪ್ರಭಾವಶಾಲಿ ಕೃತಿಯ ಗುರುತರವಾದ ಭಾಗವನ್ನು ಪೂರ್ಣಗೊಳಿಸಿದರು. 1978 ರಲ್ಲಿ ಅವರು 'ಸಂಖ್ಯಾಗಣಿತಶಾಸ್ತ್ರ ಸೊಸೈಟಿ' ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡುವ 'ಫ್ರಿಶ್ಚ್ ಪದಕ' ಪಡೆದ ಮೊಟ್ಟ ಮೊದಲಿಗರು. 1980 ರಲ್ಲಿ ಅವರ 'ವಿವಿಧ ಅನುಭೋಗಿ ಸರಕುಗಳ ಬೇಡಿಕೆ ಹೇಗೆ ಬೆಲೆ ಮತ್ತು ಆದಾಯವನ್ನು ಅವಲಂಬಿಸಿರುತ್ತದೆ' ಎಂಬ ಲೇಖನ ದಿ ಅಮೇರಿಕನ್ ಎಕನಾಮಿಕ್ ರಿವ್ಯೂ ನಲ್ಲಿ ಪ್ರಕಟವಾಯಿತು. ಈ ಲೇಖನವು 1970 ರಿಂದೀಚೆಗೆ ಈ ಪತ್ರಿಕೆಯಲ್ಲಿ ಪ್ರಕಟಗೊಂಡ 20 ಅತ್ಯಂತ ಪ್ರಭಾವಶಾಲಿ ಲೇಖನಗಳಲ್ಲೊಂದಾಗಿದೆ. 1980 ರಲ್ಲಿ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಡ್ವೈಟ್ ಡಿ ಐಸಿನ್ಹೋವರ್ ಅಂತರರಾಷ್ಟ್ರೀಯ ವಿಷಯದ ಪ್ರಾಧ್ಯಾಪಕರಾಗಿ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ವುಡ್ರೋ ವಿಲ್ಸನ್ ಶಾಲೆಯ ಸಾರ್ವಜನಿಕ ಮತ್ತು ಅಂತರರಾಷ್ಟ್ರೀಯ ವಿಷಯದ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುತ್ತಾರೆ. ಅವರು ಬ್ರಿಟನ್ ಮತ್ತು ಅಮೇರಿಕದ ಪೌರತ್ವವನ್ನು ಹೊಂದಿದ್ದಾರೆ. ಅಕ್ಟೋಬರ್ 2015ರಲ್ಲಿ ಡೀಟನ್ ಅವರು ಆ ವರ್ಷದ ಅರ್ಥಶಾಸ್ತ್ರ ವಿಜಾನದ ನೋಬೆಲ್ ಮೆಮೋರಿಯಲ್ ಬಹುಮಾನವನ್ನು ಗೆದ್ದಿದ್ದಾರೆಂದು ಘೋಷಿಸಲಾಯಿತು. ಡೀಟನ್ ಅವರು ಬಹಳ ಸಂತೋಷಪಟ್ಟರು ಮತ್ತು "ಯಾರಿಗೆ ಪ್ರಪಂಚದ ಬಡವರ ಬಗ್ಗೆ ಕಳಕಳಿಯಿದೆಯೋ ಅವರು ಮತ್ತು ಜನರು ಹೇಗೆ ವರ್ತಿಸುತ್ತಾರೋ ಅವರಿಗೆ ಒಳ್ಳೆಯ ಜೀವನ ಅದು ಕೊಡುತ್ತದೆ" ಅವರನ್ನು ಕುರಿತು ಅವರೇ ವಿವರಿಸಿಕೊಂಡರು ಎಂದು ಬಿಬಿಸಿ ವರದಿ ಮಾಡಿತು. ದಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ( ) "ವಿವರವಾದ ವ್ಯಕ್ತಿಯ ಆಯ್ಕೆಗಳು ಮತ್ತು ಸಮಗ್ರ ಫಲಿತಾಂಶಗಳನ್ನು ಜೋಡಿಸುವ ಮೂಲಕ ಅವರ ಸಂಶೋಧನೆಯು ಸೂಕ್ಶ್ಮ ಅರ್ಥಶಾಸ್ತ್ರ, ಸಮಗ್ರ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ಕ್ಷೇತ್ರಗಳಿಗೆ ವರ್ಗಾವಣೆಯಾಗಲು ಸಹಾಯವಾಯಿತು, ಯಾರೊಬ್ಬರಿಗಿಂತಲೂ ಹೆಚ್ಚಿನದಾಗಿ ಆಂಗಸ್ ಡೀಟನ್ ಅವರು ಈ ತಿಳುವಳಿಕೆಯನ್ನು ಎತ್ತಿ ಹಿಡಿದಿದ್ದಾರೆ" ಎಂದು ಹೇಳುತ್ತಾ, ಒಮ್ಮೆ ಅನುಭೋಗಿಯ ಆಯ್ಕೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬಡತನವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರ್ಥಿಕ ನೀತಿಯನ್ನು ರೂಪಿಸಲು ಸಾದ್ಯ ಎಂದು ಹೇಳಿತು. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ವಿಲಿಯಮ್ ಈಸ್ಠರ್ಲೀ "ವಿವಿಧ ಕ್ಷೇತ್ರಗಳಲ್ಲಿ ಆಂಗಸ್ ಅವರ ಕೊಡುಗೆ ಎಷ್ಟು ಎಂಬುದು ಈ ನೋಬೆಲ್ ಮನತಟ್ಟುವುದು" ಎಂದು ಹೇಳುತ್ತಾರೆ. ಈಸ್ಠರ್ಲೀ ಅವರು ಡೀಟನ್ರ ಸಂಶೋಧನಾ ಕ್ಷೇತ್ರದಲ್ಲಿ ರಾಜಕೀಯ ಅಂಶಗಳ ಬಗ್ಗೆ ಮತ್ತು ಅವರ ಕೃತಿಯಲ್ಲಿ "ಸುತ್ತು ಬಳಸಿನ ವಿವರಗಳು " ಒಳಗೊಂಡಿರುವುದರಲ್ಲಿ ಇರುವ ಧೈರ್ಯವನ್ನು ಗಮನಿಸಿದ್ದಾರೆ ಮತ್ತು " ಈ ಕ್ಷೇತ್ರದಲ್ಲಿ ಕಾರ್ಯಸೂಚಿ ಹೊಂದಿರುವವರು ಸಾಕಷ್ಟು ಜನರಿದ್ದರೂ ಯಾರೊಬ್ಬರೂ ಕೂಡ ಈ ಪ್ರಶ್ನೆಗಳ ವಿಷಯದಲ್ಲಿ ಅವರು ಕಾರ್ಯಸೂಚಿ ಹೊಂದಿರುವುದರೆಂದು ಅವರನ್ನು ದೂಷಿಸಲಾರರು" ಎಂದು ಸೇರಿಸುತ್ತಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ' 2016-11-28 ವೇಬ್ಯಾಕ್ ಮೆಷಿನ್ ನಲ್ಲಿ.